ದಿನಾಂಕ 10-12-2014 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ QMT ಪ್ರಗತಿ ಪರಿಶೀಲನಾ ಸಭೆಯಲ್ಲಿ BEO ಮತ್ತು DDPI ರವರ ಶಾಲಾ ಭೇಟಿಯ ಬಗ್ಗೆ ವಿಚಾರಿಸಿದರು BEO ಮತ್ತು DDPI ರವರ ವಾಹನಗಳಿಗೆ GPS ಅಳವಡಿಸುವಂತೆಯೂ ತೀರ್ಮಾನ ತೆಗೆದುಕೊಳ್ಳಲಾಯಿತು. ಸ್ವಯಂ ಪ್ರೇರಣೆಯಿಂದ ಶಾಲೆಗಳ ಗುಣಮಟ್ಟ ಸುಧಾರಿಸಲು ಕ್ರಮ ವಹಿಸಬೇಕೆಂದು ಕಳಕಳಿಯಿಂದ ಮಾತನಾಡಿದರು. ಸಭೆಯಲ್ಲಿ ಮಾನ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ ಗೋವಿಂದೇಗೌಡ, ಸ್ಥಾಯಿ ಸಮಿತಿ ಅದ್ಯಕ್ಷರಾದ ಶ್ರೀ ಸತ್ಯನಾರಾಯಣ, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರುಗಳು, ಮಾನ್ಯ ಜಿಲ್ಲಾಧಿಕಾರಿಗಳು,ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್, ಹಾಸನ ಮತ್ತು ಉಪನಿರ್ದೇಶಕರು ಆಡಳಿತ ಮತ್ತು ಅಭಿವ್ರದ್ಧಿ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಇದೊಂದು ಧನಾತ್ಮಕ ಅಂಶಗಳ ಸಭೆಯಾಗಿದ್ದಿತು.
https://www.facebook.com/faneesha.giridhar?fref=ts
ದಿನಾಂಕ 2-11-2014ರಂದು ಬೆಳಿಗ್ಗೆ 11 ಗಂಟೆಗೆ ಹಾಸನದ ಹಾಸನಾಂಬ ಕಲಾ ಭವನದಲ್ಲಿ ನಡೆದ
"ಮಕ್ಕಳ ಸುರಕ್ಷತಾ ಸಪ್ತಾಹ" ದಲ್ಲಿ ಭಾಗವಹಿಸಿದ ಮಾನ್ಯ ಪ್ರಕಾಶ, ಶಾಸಕರು, ಮಾನ್ಯ
ಲಕ್ಷ್ಮಣಗೌಡ, ಉಪಾದ್ಯಕ್ಷರು,ಜಿಲ್ಲಾ ಪಂಚಾಯತ್ , ಹಾಸನ, ಮಾನ್ಯ ಸತ್ಯನಾರಾಯಣ, ಶಿಕ್ಷಣ
ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಹಾಸನ, ಮಾನ್ಯ
ರವಿ.ಡಿ.ಚನ್ನಣ್ಣನವರ್, ಪೋಲೀಸ್ ವರಿಷ್ಠಾಧಿಕಾರಿಗಳು, ಹಾಸನ, ಶ್ರೀಮತಿ ಗೀತಾ, ಜಿಲ್ಲಾ
ರಕ್ಷಣಾ ಘಟಕದ ಅಧಿಕಾರಿಗಳು, ಹಾಸನ ಮತ್ತು ಶ್ರೀ ಕಾಂತರಾಜು ಉಪನಿರ್ದೇಶಕರು ಸಾ,ಶಿ,ಇ,
ಹಾಸನ ಮತ್ತು ಪತ್ರಿಕಾ ಪ್ರತಿನಿಧಿಗಳು, ಮುಖ್ಯ ಶಿಕ್ಷಕರು,ಸಹಶಿಕ್ಷಕು ಹಾಗೂ
ವಿದ್ಯಾರ್ಥಿಗಳು ಭಾಗವಹಿಸಿದ ಸಂದರ್ಭ.
Veda Vathi added 7 new photos.
No comments:
Post a Comment